ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ನೆಚ್ಚಿಕೊಂಡು ಮತ ನೀಡಿದ್ದನಾಡಿನ ಜನತೆಗೆ ಭ್ರಮನಿರಸನ ಗೊಂಡಿದ್ದು, ಯಾವೊಬ್ಬ ಶಾಸಕರಿಗೂ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ, ನಾಡಿನ ಜನತೆಗೆ ಒಂದೇ ಒಂದು ಹೊಸ ಯೋಜನೆ ಜಾರಿ ಮಾಡದೇ, ಯಾವೊಂದು ಅಭಿವೃದ್ಧಿ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಿಲ್ಲ. ತಾವು ಕೊಟ್ಟ ಭರವಸೆಗಳನ್ನೂ ಈಡೇರಿಸದೇ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಾ ಕನ್ನಡಿಗರ ಶಾಪಕ್ಕೆ ಗುರಿಯಾಗಿದ್ದರೂ ಭಂಡತನದಿಂದ ಜಾಹೀರಾತು ನೀಡುತ್ತಾ ಎರಡು ವರ್ಷದ ಸಾಧನಾ ಸಮಾವೇಶ ಮಾಡಿರುವ ಕಾಂಗ್ರೆಸ್ಸಿಗರು ಎಲ್ಲೆಡೆ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಕುರಿತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂದರ್ಶನ.